Click here to Download MyLang App

ಕೃತಿಕರ್ಷ (ಇಬುಕ್)

ಕೃತಿಕರ್ಷ (ಇಬುಕ್)

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಡಾ. ಅಜಿತ್ ಹರೀಶಿಯವರ 'ಕೃತಿಕರ್ಷ' ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯ ಎಂದು ನನಗೆ ಅನ್ನಿಸಿದೆ. ಯಾಕೆಂದರೆ ಡಾ. ಅಜಿತ್‌‌ರವರು ಇತ್ತೀಚೆಗೆ ಸಾಹಿತ್ಯ ಲೋಕದಲ್ಲಿ ಸಂಚಲನವನ್ನು ಉಂಟು ಮಾಡಿದ ಸಾಹಿತಿ. ನಾಡಿನಲ್ಲಿ ಪ್ರಕಟಗೊಂಡ ಅನೇಕ ಉತ್ತಮ ಕತೆ, ಕಾದಂಬರಿ, ಕವನ ಸಂಕಲನಗಳ ಒಂದು ಸ್ಥೂಲವಾದ ನೋಟ ಕೃತಿಕರ್ಷದ ಬರಹಗಳಿಂದ ಸಾಧ್ಯವಾಗುತ್ತದೆ. ಮೌಲ್ಯಮಾಪನ ಸಂದರ್ಭದಲ್ಲಿ ರೆಡಿ ರೆಕೋನರ್‌‌ನಂತೆ ಅಥವಾ ಕೈಪಿಡಿಯಂತೆ ಇಂಥ ಪುಸ್ತಕಗಳು ನೆರವಿಗೆ ಬರುತ್ತವೆ. ಅಲ್ಲದೇ ಡಾ. ಅಜಿತ್‌‌ರವರ ಓದಿನ ಹರಹು ಎಷ್ಟು ವಿಶಾಲವೂ, ಗಂಭೀರವೂ ಮತ್ತು ಆಳವೂ ಆಗಿದೆ ಎನ್ನುವುದನ್ನು ನೋಡುವುದಕ್ಕೂ ಅನುಕೂಲವಾಗಲಿದೆ. ಆದ್ದರಿಂದ 'ಕೃತಿಕರ್ಷ' ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯ ಪರಿಕರವಾಗುತ್ತದೆಂದು ಹೇಳಲು ಇಷ್ಟಪಟ್ಟಿದ್ದೇನೆ. ಸಹೃದಯ ಓದುಗರ ಇಂಥ ಟಿಪ್ಪಣಿಯು ಲೇಖಕನಿಗೆ ಸ್ಪೂರ್ತಿದಾಯಕವೂ ಆಗುತ್ತದೆ ಎನ್ನುವ ಮಾತುಗಳನ್ನು ನಾನು ಕೇಳಿಸಿಕೊಳ್ಳುತ್ತ ಬಂದಿದ್ದೇನೆ. ಕವಿ, ಕತೆಗಾರನಾದವನ ಓದು, ಸಾಮಾನ್ಯ ಓದುಗನ ದೃಷ್ಟಿಕೋನದಂತಿರುವುದಿಲ್ಲ. ಸಾಮಾನ್ಯ ಓದುಗನು ವ್ಯಕ್ತಪಡಿಸುವ ಅಭಿವ್ಯಕ್ತಿ, ಅಭಿಪ್ರಾಯಗಳಿಗಿಂತ ಭಿನ್ನವಿರುತ್ತವೆ. ವಿಭಿನ್ನವಾಗಿರಬೇಕೆಂದು ಸೃಜನಶೀಲ ಲೋಕವೂ ಅಪೇಕ್ಷೆ ಪಡುತ್ತದೆ. ಹೀಗೆ ಓದಿದವುಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇಳುವುದರ ಮೂಲಕ ಆ ಸಾಹಿತ್ಯಗಳಿಗೆ ಒಂದು ರೀತಿಯ ನ್ಯಾಯ ಒದಗಿಸಬಹುದು. ಅದರಿಂದ ಬರಹಗಾರನಿಗೆ ಮಾರ್ಗದರ್ಶಿಯೂ ಆಗಬಹುದು. ಸಾಹಿತ್ಯ ಪ್ರಪಂಚಕ್ಕೆ ಅನುಕೂಲವಾಗುತ್ತದೆ. ಲೇಖಕ ಒಳ್ಳೆಯ ಕೃತಿಗಳನ್ನು ನೀಡಲು ನೆರವಾಗುತ್ತದೆ. - ಅಶೋಕ ಹಾಸ್ಯಗಾರ ಆಯ್ದ ಎಪ್ಪತ್ತೇಳು ಲೇಖಕರ ಎಂಬತ್ತೇಳು ಕೃತಿಗಳ ಕುರಿತ ಒಂದು ಬೆಳಕಿಂಡಿ ಇಲ್ಲಿದೆ. ಇದನ್ನು ಓದಿ, ಆ ಪುಸ್ತಕಗಳು ಇಷ್ಟವಾದರೆ, ಈ ಪ್ರಯತ್ನ ಸಾರ್ಥಕವಾದಂತೆ. - ಡಾ. ಅಜಿತ್ ಹರೀಶಿ

 

ಕೃತಿಕರ್ಷ, ಡಾ. ಅಜಿತ್ ಹರೀಶಿ,Krutikarsha,Ajit Harishi

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಕಾವ್ಯಾ ಹೆಗಡೆ
ಸದಭಿರುಚಿಯ ಓದುಗರಿಗೆ ಉಪಯುಕ್ತ ಪುಸ್ತಕ

ಕನ್ನಡದ ವಿವಿಧ ಪುಸ್ತಕಗಳ ಪರಿಚಯ ಇಲ್ಲಿದೆ. ಹಿಂದಿನ ಮತ್ತು ಇಂದಿನ ತಲೆಮಾರಿನ ಲೇಖಕರ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ ಮತ್ತು ಕೆಲವು ಅನುವಾದಿತ ಕೃತಿಗಳ ಕುರಿತು ಬರೆದ ಈ ಲೇಖನಗಳು ನಮಗೆ ತಿಳಿದಿಲ್ಲದ ಎಷ್ಟೋ ಉತ್ತಮ ಪುಸ್ತಕಗಳ ಬಗ್ಗೆ ತಿಳಿಸಿಕೊಡುತ್ತವೆ. ಒಂದು ರೀತಿಯಲ್ಲಿ ಓದುಗರಿಗೆ ದಾರಿ ತೋರಿಸುವಂತಿವೆ ಈ ಲೇಖನಗಳು. ಸದಭಿರುಚಿಯ ಓದುಗರಿಗೆ ಬಹಳ ಉಪಯುಕ್ತ ಪುಸ್ತಕ. ಇಂಥ ಒಳ್ಳೆಯ ಪುಸ್ತಕಕ್ಕಾಗಿ ಡಾ. ಅಜಿತ್ ಹರೀಶಿಯವರಿಗೆ ಧನ್ಯವಾದ.